ಅಮುದ್ರಿತ ಗ್ರಂಥಚಿಂತಾಮಣಿ
	ಸಾಹಿತ್ಯಸೇವೆಯನ್ನೇ ಪ್ರಧಾನವಾಗಿಟ್ಟುಕೊಂಡು ಪ್ರಕಟವಾದ ತೆಲುಗು ಮಾಸಪತ್ರಿಕೆಗಳಲ್ಲಿ ಪ್ರಮುಖ ಸ್ಥಾನ ಪಡೆದ ಮಾಸಿಕ. 19ನೆಯ ಶತಮಾನದ ಕೊನೆಯಲ್ಲಿ ಸ್ಥಾಪಿತವಾದ ಈ ಪತ್ರಿಕೆಗೆ ಪಿ. ರಾಮ ಕೃಷ್ಣಯ್ಯನವರು ಸಂಪಾದಕರು. ತಾಳೆಗರಿಯಲ್ಲಿದ್ದ ಹಸ್ತಪ್ರತಿಗಳನ್ನು ಸಂಪಾದಿಸಿ ಸರಳವಾದ ತೆಲುಗು ಭಾಷೆಯಲ್ಲಿ ಪ್ರಕಟಿಸಿದ ಕೀರ್ತಿ ಅವರ ಮತ್ತು ಅವರ ಸಹೋದ್ಯೋಗಿಗಳದ್ದು.													     
 (ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ